ಭಟ್ಕಳ:೫, ಸರಕಾರದ ಸವಲತ್ತುಗಳಿಂದ ವಂಚಿತ ಅನುದಾನಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ಕನ್ನಡ ಮಾಧ್ಯಮದ ಶಿಕ್ಷಕರ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸಭೆಯನ್ನು ಮಾ.೭ ರಂದು ನಗರದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಕರೆಯಲಾಗಿದೆ ಎಂದು ಭಟ್ಕಳ ತಾಲೂಕಾ ಖಾಸಗಿ ಮಧ್ಯಮಿಕ ಶಾಲಾ ಕಾಲೇಜುಗಳ ಸಂಘದ ಅಧ್ಯಕ್ಷ ಜೆ.ಸಿ. ದೇವರಾಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ೧೯೭೮ರಿಂದ ೧೯೮೭ ರ ಅವಧಿಯಲ್ಲಿ ನೇಮಕಗೊಂಡ ಸರ್ಕಾರಿ ಶಾಲಾ ನೌಕರರಿಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಅದ್ಯಾಯನ ಮಾಡಿದವರಿಗೆ ಹೆಚ್ಚುವರಿ ಇಂಕ್ರಿಮೆಂಟ್ ಮಂಜೂರು ಮಾಡಿ ಶಿಕ್ಷಕರ ವೇತನದಲ್ಲಿ ಸೇರಿಸಿ ಹಿಂದಿನ ಬಾಕಿ ಹಣವನ್ನು ನಗದು ರೂಪದಲ್ಲಿ ಶಿಕ್ಷಕರಿಗೆ ನೀಡಿದೆ. ಆದರೆ ಈ ಸೌಲಭ್ಯವನ್ನು ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ನೀಡಿರುವುದಿಲ್ಲ. ಈ ಸಂಭಂದ ಅನುದಾನಿತ ಶಾಲೆಗಳ ಎಲ್ಲಾ ನೌಕರರು ರಾಜ್ಯ ಉಚ್ಚ ನ್ಯಾಯಲಯದಲ್ಲಿ ದಾವೆಯನ್ನು ಹೂಡಿದ್ದು ನ್ಯಾಯಲಯು ತನ್ನ ತೀರ್ಪಿನಲ್ಲಿ ಸರಕಾರಿ ನೌಕರರಿಗೆ ಸಿಗುವ ಸೌಲಭ್ಯವಗಳನ್ನು ಅನುದಾನಿತ ಶಾಲಾ ಸಿಬಂಧಿಗಳಿಗೂ ಸಿಗಬೇಕೆಂದು ತೀರ್ಪು ನೀಡಿತ್ತು. ಆದರೆ ರಾಜ್ಯ ಸರ್ಕಾರವು ನ್ಯಾಯಲಯದ ತೀರ್ಪಿಗೆ ಗೌರವವನ್ನು ನೀಡದೆ ಅದನ್ನು ಉಲ್ಲಂಘಿಸಿರುತ್ತದೆ. ಆದ್ದರಿಂದ ಸರಕಾರದ ಈ ಮಲತಾಯಿ ಧೋರಣೆಯನ್ನು ವಿರೋಧಿಸಿ ಪುನಃ ಹೋರಾಟವನ್ನು ಮುಂದುವರಿಸುವ ನಿಟ್ಟಿನಲ್ಲಿ ಸರಕಾರದ ಸೌಲಭ್ಯ ವಂಚಿತ ಅನುದಾನಿತ ಶಾಲಾ ನೌಕರರು ಹೋರಾಟದ ಮುಂದಿನ ರೂಪುರೇಷೆಗಳನ್ನು ಚರ್ಚಿಸಲು ಮಾ.೭ಭಾನುವಾರದಂದು ಭಟ್ಕಳದಲ್ಲಿ ಸಭೆಯನ್ನು ಆಯೋಜಿಸಿದ್ದು ಈ ಸಭೆಯಲ್ಲಿ ಉಚ್ಚ ನ್ಯಾಯಲಯದಲ್ಲಿ ನಮ್ಮ ಪರವಾಗಿ ದಾವೆಯನ್ನು ಮಂಡಿಸುತ್ತಿರುವ ನ್ಯಾಯವಾದಿ ಬಸವರಾಜಸ್ವಾಮಿ ವಿರಕ್ತಿಮಠ ಹುಬ್ಬಳಿ ಭಾಗವಹಿಸುತ್ತಿದ್ದು ಕನ್ನಡ ಇಂಕ್ರಿಮೆಂಟ್ ವಂಚಿತ ಶಿಕ್ಷಕರು ತಪ್ಪದೆ ಸಭೆಗೆ ಹಾಜರಾಗಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸದ್ದಾರೆ.